ಈ ಕಣ್ಣಿನಲ್ಲಿ
ಜಸ್ಟ್ ಮಾತ್ ಮಾತಲ್ಲಿಈ ಕಣ್ಣಿನಲ್ಲಿ ಕಣ್ ಚಿಪ್ಪಿನಲ್ಲಿ
ನೂರ್ ಆಸೆಗಳು ಕರೆದಿದೆ
ಈ ಹಾಡಿನಲ್ಲಿ ನಾ ಬರೆದ ಸಾಲಿನಲ್ಲಿ
ಪ್ರಿತಿಯೇ ಹರಿದಿದೆ ಎಂದಿಗೂ
ಈ ಪ್ರೀತಿಲೆ ಹಾರಾಡುತ್ತಾ ಆ ಬಾನಿಗೆ ಮುತ್ತಿಕ್ಕುತ್ತಾ
ತೇಲಾಡುತಾ ಓಲಾಡುತಾ ಮೈಮರೆಯುವೆ
ಎಲ್ಲೊ ಹುಟ್ಟಿ ಬಂದರು ಒಂದು ಸೇರೊ ಇಬ್ಬರು
ಪ್ರೇಮವೇ ಸೇತುವೆ
ಎಷ್ಟೆ ಓದಿಕೊಂಡರು ಎಷ್ಟೆ ದುಡ್ಡು ಕಂಡರು
ಪ್ರೇಮವೇ ಬಾಳುವೆ
ಹಚ್ಚಿ ಮನದಿ ಪ್ರೀತಿ ಎಂಬ ಹಣತೆಯ
ಹಾಡಿ ನಿತ್ಯ ಹೀಗೆ ಪ್ರೇಮ ಕವಿತೆಯ
ಸ್ವರ್ಗ ಭುವಿಯಲ್ಲೆ ನಾ ಕಾಣುವೆ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಕಣ್ಕಣ್ಣಲ್ಲಿ ಏನೊ ಮೋಡಿ ಮಾಡಿ ಸೆಳೆವುದು
ನಿನ್ನ ಕಂಡ ಈ ಕ್ಷಣ ಚಿತ್ತದಲ್ಲಿ ತಲ್ಲಣ
ಪ್ರೀತೆಯೇ ಕಾರಣ
ಇಂದು ನನ್ನ ಈ ಮನ ಪ್ರೀತಿಯಿಂದ ಹೂ ಬನ
ಪ್ರೀತಿಯೇ ಚೇತನ
ಬಿಚ್ಚಿ ಕನಸ ಮೂಟೆ ನನ್ನ ಕಣ್ಣಲಿ
ಪ್ರೀತಿ ಹಂಚುವೆ ನಾನು ಜಗದಲಿ
ಈ ಪ್ರೀತಿಯೇ ನನ್ನ ದೈವ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಕಣ್ಕಣ್ಣಲ್ಲಿ ಏನೊ ಮೋಡಿ ಮಾಡಿ ಸೆಳೆವುದು
ಈ ಮನವ ಕಾಡುವುದು ಈ ಜೀವವ ಆಳುವುದು
ಈ ತವಕವು ಅಂಜಿಕೆಯು ರೋಮಾಂಚನ
ಜಸ್ಟ್ ಮಾತ್ ಮಾತಲ್ಲಿ ಈ ಕಣ್ಣಿನಲ್ಲಿ
ಜಸ್ಟ್ ಮಾತ್ ಮಾತಲ್ಲಿ
ಚಿತ್ರ ನೋಡಿ